ಜೀವನದಲ್ಲಿ ಪದೇ...ಪದೇ ತಪ್ಪುಗಳನ್ನು, ಪಾಪ ಕೃತ್ಯಗಳನ್ನು ಮಾಡುವುದು ಹಾಗೂ ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಹೋಮ,ಹವನ,ಜಪ,ತಪ ಪ್ರಾರ್ಥನೆ ಪೂಜೆ ಮತ್ತು ಧಾರ್ಮಿಕ ಗ್ರಂಥಗಳ ಪಠಣವನ್ನು ಮಾಡುವುದು. ಹಾಗೂ ಪರಿಹರಿಸಿಕೊಂಡ ನಂತರ ಪುನಃ ಅದೇ ತಪ್ಪುಗಳನ್ನು, ಪಾಪಕೃತ್ಯಗಳನ್ನು ಮಾಡುವುದು ಮತ್ತದೇ ಪುನರಾವರ್ತನೆ ಎಂಬಂತೆ ಪ್ರಾಯಶ್ಚಿತಾರ್ಥಕ್ಕಾಗಿ ಪರಿಹಾರ ಕಾರ್ಯಗಳನ್ನು ಮಾಡುವುದನ್ನು ಧರ್ಮವೆನ್ನುತ್ತಾರೆ.
ಆದರೆ ಧಮ್ಮವೆಂದರೆ ಹಾಗಲ್ಲ ಭಗವಾನ್ ಬುದ್ಧನು ಭೋದಿಸಿದ ಪಂಚಶೀಲ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ನಾವು ಜೀವನದಲ್ಲಿ ತಪ್ಪುಗಳನ್ನು ಮಾಡದಂತೆ, ಪಾಪಕೃತ್ಯಗಳನ್ನು ಮಾಡದಂತೆ, ಬುದ್ಧನು ಜಗತ್ತಿಗೆ ಸಾರಿದ ಸಂದೇಶವಾದ ( ಸ್ವಾತಂತ್ರ್ಯ,ಸಮಾನತೆ,ಸಹೋದರತೆ) ಶಾಂತಿ,ಸಮತೆ,ಸಹೋದರತೆ,ಮೈತ್ರಿ ,ಪ್ರಜ್ಞೆ ಹಾಗೂ ಕರುಣೆಯ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಬುದ್ಧನ ಪಥದಲ್ಲಿ ಸಾಗುವುದನ್ನು ಧಮ್ಮವೆನ್ನುತ್ತಾರೆ.
ಇದು ಇತರೇ ಧರ್ಮಕ್ಕೂ ಮತ್ತು ಭಗವಾನ್ ಬುದ್ಧ ಪ್ರತಿಪಾದಿಸಿದ ಧಮ್ಮಕ್ಕೂ ಇರುವ ವ್ಯತ್ಯಾಸವಾಗಿದ್ದು ಜಗತ್ತಿನ ಎಲ್ಲಾ ಧರ್ಮಗಳು ದೇವಕೇಂದ್ರಿತವಾಗಿದ್ದರೆ ಭಗವಾನ್ ಬುದ್ಧನ ಧಮ್ಮವು ಮಾನವ ಕೇಂದ್ರಿತವಾಗಿದೆ...☸
☸ಧಮ್ಮಾನಂದ ಬೆಳ್ತಂಗಡಿ☸
ಉತ್ತಮವಾದ ವಿಚಾರ.ಜೈ ಭೀಮ್ ನಮೋ ಬುದ್ದಾಯ.
ReplyDelete